ಹಾವೇರಿ ಶಾಲೆಯ ಸ್ಮಾರ್ಟ್ ಕ್ಲಾಸ್ಗೆ ಬಂದ ನಾಗರಹಾವು ಸೆರೆ : ವಿಡಿಯೋ - ಈಟಿವಿ ಭಾರತ ಕನ್ನಡ
ಹಾವೇರಿ: ನಾಗರಹಾವೊಂದು ಶಾಲೆಗೆ ಬಂದು ಅವಿತಿದ್ದ ಘಟನೆ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಿರಿಯ ಕನ್ನಡ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ ಸ್ಮಾರ್ಟ್ ಕ್ಲಾಸ್ ಕೋಣೆಯಲ್ಲಿ ಹಾವು ಕಂಡು ಬಂದಿತ್ತು. ಅದನ್ನು ಕಂಡ ಶಾಲಾ ವಿದ್ಯಾರ್ಥಿಗಳು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಕ್ಷಣಕಾಲ ಬೆಚ್ಚಿಬಿದ್ದಿದ್ದರು. ನಂತರ ಸಮೀಪದ ನೆಗಳೂರು ಗ್ರಾಮದ ಉರಗ ತಜ್ಞ ಸಿಕಂದರ ಮುಲ್ಲಾರನ್ನು ಕರೆಯಿಸಿ ನಾಗರಹಾವು ರಕ್ಷಣೆ ಮಾಡಲಾಗಿದೆ.