VIDEO: ಗೋಡೆಯಲ್ಲಿ ಅರ್ಧಕ್ಕೆ ಸಿಲುಕಿದ್ದ ನಾಗರಹಾವು ರಕ್ಷಣೆ - ತುಮಕೂರಿನಲ್ಲಿ ನಾಗರಹಾವು ರಕ್ಷಣೆ
ತುಮಕೂರು: ನಗರದ ರಂಗಾಪುರ ಕನಿಕ ಮಿಲ್ ಬಳಿ ಗೋಡೆಯಲ್ಲಿ ಸಿಲುಕಿಕೊಂಡು ಹೊರಬರಲಾಗದೇ ಒದ್ದಾಡುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಸುಮಾರು ಪಕ್ಕ ಅರ್ಧಗಂಟೆಗಳ ಕಾಲ ಹೆಡೆ ಬಿಚ್ಚಿ ನಿಂತ ಹಾವು ಜೀವ ಭಯದಿಂದ ಒದ್ದಾಡುತ್ತಿತ್ತು. ಬಿರುಕುಬಿಟ್ಟ ಗೋಡೆಯ ಜಾಗದಿಂದ ಸಂಪೂರ್ಣ ಹೊರಬರಲಾಗದೇ ಸಿಲುಕಿದ್ದ ಸರ್ಪವನ್ನು ವಾರಂಗಲ್ ವನ್ಯಜೀವಿ ಜಾಗೃತ ಸಂಸ್ಥೆಯ ಉರಗ ತಜ್ಞ ದಿಲೀಪ್ ಸುರಕ್ಷಿತವಾಗಿ ರಕ್ಷಿಸಿ, ಸಮೀಪದ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.