ರೈತರು, ಕಾರ್ಮಿಕರು, ಬಡವರ ಪರವಾಗಿ ಸಿಎಂ ಬಜೆಟ್ ಮಂಡನೆ ಮಾಡಿದ್ದಾರೆ: ರೇಣುಕಾಚಾರ್ಯ - ಬಿಎಸ್‌ವೈ ಏಳನೇ ಬಾರಿ ರಾಜ್ಯದ ಬಜೆಟ್ ಮಂಡನೆ
ರೈತರು, ಕಾರ್ಮಿಕರು, ಬಡವರ ಪರವಾಗಿ ಸಿಎಂ ಬಿಎಸ್‌ವೈ ಏಳನೇ ಬಾರಿ ರಾಜ್ಯದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸಂತಸ ವ್ಯಕ್ತಪಡಿಸಿದರು. ವಿಶೇಷವಾಗಿ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದೆ. ಇದು ಎಲ್ಲಾ ವರ್ಗದವರಿಗೂ ಸಂತಸ ತಂದಿದೆ. ಹೊನ್ನಾಳಿಯ ಹಿರೇಕಲ್ಮಠದಲ್ಲಿ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಮೇಳದ ಮೊದಲ ದಿನವೇ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ ಎಂದರು.