ಸ್ಟಾಲ್‌ನಲ್ಲಿ ಮೊಮೊಸ್ ತಯಾರಿಸಿದ ದೀದಿ.. ಸಿಎಂ ಮಮತಾ ಬ್ಯಾನರ್ಜಿ ಪಾಕ ಕೌಶಲ್ಯಕ್ಕೆ ಬೆರಗಾದ ಜನ - ಮೊಮೊಸ್ ತಯಾರಿಸಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ಸಿಕ್ಕಾಗಲೆಲ್ಲಾ ಜನರೊಂದಿಗೆ ಆತ್ಮೀಯವಾಗಿ ಬೆರೆಯುವುದನ್ನು ಕಾಣಬಹುದು. ಇತ್ತೀಚೆಗಷ್ಟೇ ಡಾರ್ಜಿಲಿಂಗ್ಗೆ ಭೇಟಿ ನೀಡಿದಾಗ ಸ್ಟಾಲ್‌ನಲ್ಲಿ ಜನರಿಗೆ ಪಾನಿಪುರಿ ಬಡಿಸಿ ಸುದ್ದಿಯಾಗಿದ್ದರು. ಇದೀಗ, ಇಂದು ಮುಂಜಾನೆ ಡಾರ್ಜಲಿಂಗ್ನ ಸ್ಥಳೀಯ ಸ್ಟಾಲ್ವೊಂದರಲ್ಲಿ ಮೊಮೊಸ್ ತಯಾರಿಸುವ ಮೂಲಕ ತಮ್ಮ ಪಾಕ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಸಿಎಂ ಮಮತಾ ಅವರ ಈ ಕೌಶಲ್ಯ ಕಂಡು ಜನರು ಬೆರಗಾಗಿದ್ದಾರೆ.