ಪತ್ರಕರ್ತ ಹನುಮಂತು ನಿಧನಕ್ಕೆ ಸಿಎಂ ಬಿಎಸ್ವೈ ಸಂತಾಪ: ರಾಜ್ಯದ ಹಲವೆಡೆ ಮೌನಾಚರಣೆ - ರಾಮನಗರ ಜಿಲ್ಲೆಯ ಖಾಸಗಿ ವಾಹಿನಿ ವರದಿಗಾರ ಹನುಮಂತು ನಿಧನ
ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ರಾಮನಗರ ಜಿಲ್ಲೆಯ ಖಾಸಗಿ ವಾಹಿನಿ ವರದಿಗಾರ ಹನುಮಂತು ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಕಾಲಿಕ ನಿಧನದ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಂತಾಪ ಸೂಚಿಸಿದ್ದು, ಹಾಗೂ ಮೈಸೂರು ಮತ್ತು ಧಾರವಾಡದಲ್ಲಿಯೂ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಪತ್ರಕರ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.