ಗುಜರಾತ್ನಲ್ಲಿ ಭಾಂಗ್ರಾ, ಗರ್ಭಾ ನೃತ್ಯ ಮಾಡಿದ ಪಂಜಾಬ್ ಸಿಎಂ ಭಗವಂತ್ ಮಾನ್ - VIDEO - ಪಂಜಾಬ್ ಸಿಎಂ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರಸ್ತುತ ಎಎಪಿ ಮುಖ್ಯಸ್ಥ ದೆಹಲಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಗುಜರಾತ್ ಪ್ರವಾಸದಲ್ಲಿದ್ದು, ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಗುಜರಾತ್ ಭೇಟಿಯ ವೇಳೆ ವೇದಿಕೆ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಗೀತೆಯೊಂದಕ್ಕೆ ಗರ್ಭಾ ನೃತ್ಯ ಪ್ರದರ್ಶಿಸುವ ಮೂಲಕ ಪಂಜಾಬ್ ಸಿಎಂ ಸಭಿಕರನ್ನ ರಂಜಿಸಿದರು. ಅಷ್ಟೇ ಅಲ್ಲದೇ, ಜನರ ಕೋರಿಕೆಯ ಮೇರೆಗೆ ಭಾಂಗ್ರಾ ಪ್ರದರ್ಶಿಸುವ ಮೂಲಕ ಎಲ್ಲರ ಮನ ಗೆದ್ದರು.