'ನಾಗೇಶ್ ನೀನ್ ಮಾತನಾಡೋದಿದ್ರೆ ಹೊರಗೆ ಕರೆದುಕೊಂಡು ಹೋಗಿ ಮಾತನಾಡು'.. ಶಿಕ್ಷಣ ಸಚಿವರ ಮೇಲೆ ಸಿಎಂ ಗರಂ - Chief Minister Basavaraja Bommai
ಬೆಂಗಳೂರು: ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿರು. ಈ ವೇಳೆ ಭಾಷಣ ಮಾಡುತ್ತಿದ್ದ ಅವರು, ವೇದಿಕೆ ಮೇಲಿದ್ದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮೇಲೆ ಗರಂ ಆದ ಘಟನೆ ನಡೆಯಿತು. ಮುಖ್ಯಮಂತ್ರಿಗಳ ಭಾಷಣದ ವೇಳೆ ವೇದಿಕೆಯಲ್ಲಿ ಪಕ್ಕದವರ ಒತೆ ಸಚಿವ ನಾಗೇಶ್ ಮಾತನಾಡುತ್ತಿರುವುದಕ್ಕೆ ಕೋಪಗೊಂಡ ಬೊಮ್ಮಾಯಿ ಅವರು 'ನಾಗೇಶ್, ನೀನ್ ಮಾತನಾಡೋದಾದ್ರೆ ಹೊರಗೆ ಕರೆದುಕೊಂಡು ಹೋಗಿ ಮಾತಾಡಿ' ಎಂದು ಗದರಿದರು.