ಕೊರೊನಾ ಮುಕ್ತರಾದ ಮೇಲೆ ಅದ್ಧೂರಿ ದಸರಾ ಮಾಡೋಣ: ಸಿಎಂ - ಸರಳ ದಸರಾ ಆಚರಣೆ
ಮೈಸೂರು: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ ಗಾಡ್೯ ಆಫ್ ಹಾನರ್ ಸ್ವೀಕರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೊರೊನಾ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಿಸಲಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ಕೃಪೆಯಿಂದ ರಾಜ್ಯ ಕೊರೊನಾ ಮುಕ್ತವಾದರೆ ಮುಂದಿನ ಬಾರಿ ಅದ್ಧೂರಿಯಾಗಿ ದಸರಾ ಆಚರಿಸೋಣ ಎಂದು ಹೇಳಿದರು.