ಕರ್ನಾಟಕ

karnataka

ETV Bharat / videos

ಬಾರ್​​ನಲ್ಲಿ ಲೈಟರ್​​ಗಾಗಿ ಗಲಾಟೆ: ಎಲ್ಲರೆದುರೇ ಲಾಂಗ್​ ಝಳಪಿಸಿದ ಪುಡಿ ರೌಡಿ- ವಿಡಿಯೋ - ಬೆಂಗಳೂರಿನಲ್ಲಿ ಲಾಂಗ್​ ಝಳಪಿಸಿದ ಪುಡಿ ರೌಡಿ

By

Published : Jun 15, 2022, 7:39 PM IST

ಬೆಂಗಳೂರು: ಬಾರ್​​ನಲ್ಲಿ ಕುಳಿತಿದ್ದಾಗ ಲೈಟರ್ ತೆಗೆದುಕೊಂಡು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಪುಡಿ ರೌಡಿಯೊಬ್ಬ ಲಾಂಗ್ ಝಳಪಿಸಿ ಬೆದರಿಸಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ನವ್ಯಾ ಬಾರ್ ಆ್ಯಂಡ್ ರೆಸ್ಟೋರೆಂಟ್​ನಲ್ಲಿ ನಡೆದಿದೆ. ಜೂನ್‌ 5ರಂದು ರಾತ್ರಿ ಮದ್ಯ ಸೇವಿಸುತ್ತಿದ್ದ ಇಬ್ಬರ ನಡುವೆ ಸಿಗರೇಟ್ ಹೊತ್ತಿಸಲು ಲೈಟರ್ ವಿನಿಮಯವಾಗಿದೆ. ಈ ಸಂದರ್ಭದಲ್ಲಿ ಲೈಟರ್ ಪಡೆದಿದ್ದವನು ಎಣ್ಣೆ ನಶೆಯಲ್ಲಿ‌ 'ಲೈಟರ್ ವಾಪಸ್ ಕೊಡಲ್ಲ' ಎಂದ. ಇದರಿಂದ ಗಲಾಟೆ ಶುರುವಾಗಿದೆ. ಇದನ್ನು ಗಮನಿಸಿದ ಅಕ್ಕಪಕ್ಕದ ಅಂಗಡಿಯವರು 'ಲೈಟರ್ ವಿಚಾರಕ್ಕೆ ಯಾಕೆ ಗಲಾಟೆ ಮಾಡಿಕೊಳ್ತಿದ್ದೀರಿ' ಎಂದು ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಆದರೆ, ಸ್ವಲ್ಪ ಸಮಯದಲ್ಲೇ ಮಾರಕಾಸ್ತ್ರ ಸಮೇತ ಮರಳಿದ ಲೈಟರ್ ಕೊಟ್ಟಿದ್ದ ಆಸಾಮಿ ಬಾರ್ ಒಳಗೆ ನುಗ್ಗಿ‌ ಲೈಟರ್ ಕೊಡಲ್ಲ ಅಂದವನ ಮೇಲೆ ಲಾಂಗ್ ಬೀಸಿದ್ದಾನೆ. ಪರಿಣಾಮ ಓರ್ವನ ತಲೆಗೆ ಗಾಯಗಳಾಗಿವೆ.

ABOUT THE AUTHOR

...view details