ಚಾಮರಾಜನಗರ: ಮನೆಗೆ ಬಂತು ಅಪರೂಪದ ಸುಗಂಧ ಸೂಸುವ ಪುನುಗು ಬೆಕ್ಕು - ಚಾಮರಾಜನಗರದಲ್ಲಿ ಮನೆಗೆ ಬಂದಿದ್ದ ಸುಗಂಧ ಸೂಸುವ ಬೆಕ್ಕು
ಚಾಮರಾಜನಗರ: ಸುಗಂಧ ಸೂಸುವ ಅಪರೂಪದ ಪ್ರಾಣಿ ಪುನುಗು ಬೆಕ್ಕು ದಿಢೀರ್ ಮನೆಗೆ ಎಂಟ್ರಿ ಕೊಟ್ಟ ಘಟನೆ ಚಾಮರಾಜನಗರದ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಶಿವಮ್ಮ ಎಂಬುವರ ಮನೆಗೆ ಬಂದಿದ್ದ ಪುನುಗು ಬೆಕ್ಕನ್ನು ಉರಗಪ್ರೇಮಿ ಸ್ನೇಕ್ ಚಾಂಪ್ ರಕ್ಷಿಸಿ ಬಿಆರ್ಟಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪುನುಗು ಬೆಕ್ಕು ಸುಗಂಧ ಹೊರಸೂಸುವ ಪ್ರಾಣಿಯಾಗಿದ್ದು, ಮುಂಗುಸಿಗಳ ಕುಟುಂಬಕ್ಕೆ ಸೇರಿದ ನಿಶಾಚರ ಸಸ್ತನಿಯಾಗಿದೆ. ಇವು ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣ ಹೊಂದಿರುತ್ತವೆ. ಇವುಗಳ ಜನನಾಂಗದ ಗ್ರಂಥಿಯಿಂದ ಸುಗಂಧ ದ್ರವ್ಯ ಬಿಡುಗಡೆ ಆಗುತ್ತದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆಯುಕ್ತ ಮೂತ್ರ ಜೇನು ತುಪ್ಪದಂತಿರುತ್ತದೆ. ಇದನ್ನು ಸುಗಂಧ ದ್ರವ್ಯಗಳಲ್ಲಿ ಪರಿಮಳ ಹೆಚ್ಚಿಸುವ ವಸ್ತುವಾಗಿ ಬಳಸಲಾಗುತ್ತಿದ್ದು, ಇದೊಂದು ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ.