ಅಥಣಿಯಲ್ಲಿ ಸೆರೆಸಿಕ್ಕ ಅಪರೂಪದ ಪುನುಗು ಬೆಕ್ಕು - ವಿಡಿಯೋ - ಪುನುಗು ಬೆಕ್ಕು
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ನಿನ್ನೆ ರಾತ್ರಿ ಚಿರತೆಯ ಮರಿಯನ್ನು ಹೋಲುವಂತ ಪ್ರಾಣಿ ಸೆರೆ ಸಿಕ್ಕಿದೆ. ಸ್ಥಳೀಯರು ಚಿರತೆ ಮರಿ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಂತೆ, ಸ್ಥಳಕ್ಕೆ ಅಥಣಿ ವಲಯ ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದಾಗ ಇದು ಪುನುಗು ಬೆಕ್ಕು(ಸಿವೆಟ್ ಕ್ಯಾಟ್) ಎಂದು ತಿಳಿಸಿದ್ದಾರೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಮಹಾದೇವ ಹೊನ್ನೊಳ್ಳಿ ಎಂಬುವವ ಹೊಲದಲ್ಲಿ ಪುನುಗು ಬೆಕ್ಕು ಹಿಡಿದು ಕೋಳಿಯ ಬೋನಿನಲ್ಲಿ ಇರಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿಗಳು ಈ ಪ್ರಾಣಿಯನ್ನು ವಶಪಡಿಸಿಕೊಂಡು ಮತ್ತೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.