ಮಹಿಳೆಯರ ಲೆಹಂಗಾ ಬಟನ್ನಲ್ಲಿಟ್ಟು ₹41 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಸಾಗಣೆ: ವಿಡಿಯೋ
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 41 ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ವಶಕ್ಕೆ ಪಡೆದುಕೊಳ್ಳುವಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಯಶಸ್ವಿಯಾಗಿದೆ. ಲೇಡೀಸ್ ಲೆಹಂಗಾ ಬಟನ್ನಲ್ಲಿಟ್ಟು ಈ ವಿದೇಶಿ ಕರೆನ್ಸಿ ಅಕ್ರಮವಾಗಿ ಸಾಗಣೆ ಮಾಡಲಾಗ್ತಿತ್ತು ಎಂದು ಸಿಐಎಸ್ಎಫ್ ಸಿಬ್ಬಂದಿ ತಿಳಿಸಿದ್ದಾರೆ. ಮಿಸಾಮ್ ರಾಝಾ ಎಂದು ಗುರುತಿಸಲಾಗಿರುವ ಪ್ರಯಾಣಿಕ ಸ್ಪೈಸ್ ಜೆಟ್ ವಿಮಾನದಲ್ಲಿ ದೆಹಲಿಯಿಂದ ದುಬೈಗೆ ತೆರಳುತ್ತಿದ್ದರು. ಈ ವೇಳೆ ಅವರನ್ನು ತಪಾಸಣೆಗೊಳಪಡಿಸಿದಾಗ ವಿದೇಶಿ ಕರೆನ್ಸಿ ಸಿಕ್ಕಿವೆ.