ಪ್ರಧಾನಿ ಮೋದಿಗೆ ನೀಡಲಾದ ‘ಕೋದಂಡರಾಮ’ನ ನಿರ್ಮಾತೃ ಹೇಳಿದ್ದೇನು? - ಚೆನ್ನಪಟ್ಟಣ ಬೊಂಬೆ
ಅಯೋಧ್ಯಾಧಿಪತಿ ಶ್ರೀರಾಮಮಂದಿರದ ಶಂಕುಸ್ಥಾಪನೆ ನೆರವೇರಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾದ ಕೋದಂಡರಾಮನ ವಿಗ್ರಹ ತಯಾರಾಗಿದ್ದು ಬೊಂಬೆನಗರಿ ಚನ್ನಪಟ್ಟಣದಲ್ಲಿ. ಕಲಾವಿದ ರಾಮಮೂರ್ತಿ ಕುಂಚದಲ್ಲಿ ಅರಳಿದ ಕಲಾಕೃತಿಗಳು ಅಯೋಧ್ಯೆಯಲ್ಲಿ ರಾರಾಜಿಸಿತ್ತು. ನಾಗದೇವನಹಳ್ಳಿಯ ಕೆಂಗೇರಿ ನಿವಾಸಿ ರಾಮಮೂರ್ತಿ ಎನ್ನುವ ಶಿಲ್ಪಿ ಇತಿಹಾಸ ಪ್ರಸಿದ್ಧ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಗಣ್ಯರಿಗೆ ಉಡುಗೊರೆ ನೀಡುವ ಪ್ರತಿಮೆ ಕೆತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ ನೋಡಿ...