ಚಾರ್ಧಾಮ್ ಯಾತ್ರೆ: 3.15 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳಿಂದ ನೋಂದಣಿ- ವಿಡಿಯೋ - ಗಂಗೋತ್ರಿ ಧಾಮದ ಬಾಗಿಲು ತೆರೆಯುವುದರೊಂದಿಗೆ ಚಾರ್ಧಾಮ್ ಯಾತ್ರೆಗೆ ಚಾಲನೆ
ಉತ್ತರಕಾಶಿ (ಉತ್ತರಾಖಂಡ್): ವಿಶ್ವವಿಖ್ಯಾತ ಚಾರ್ಧಾಮ್ ಯಾತ್ರೆ ಅಕ್ಷಯ ತೃತೀಯ ದಿನವಾದ ಮಂಗಳವಾರ ಆರಂಭವಾಗಿದೆ. ಗಂಗಾ ನದಿಯು ಉಗಮ ಸ್ಥಾನದ ಗಂಗೋತ್ರಿ ಧಾಮದ ಬಾಗಿಲು ತೆರೆಯುವುದರೊಂದಿಗೆ ಚಾರ್ಧಾಮ್ ಯಾತ್ರೆಗೆ ಚಾಲನೆ ಸಿಕ್ಕಿದೆ. ಇಂದು ಸಂಜೆ ವೇಳೆಗೆ ಯಮುನೋತ್ರಿ ಯಾತ್ರೆ ಸಹ ಆರಂಭವಾಗಲಿದೆ. ಇದುವರೆಗೆ ಚಾರ್ಧಾಮ್ ಯಾತ್ರೆಗೆ 3.15 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈಗಾಗಲೇ ಎರಡು ತಿಂಗಳವರೆಗೆ ಹೋಟೆಲ್‌ಗಳ ಬುಕಿಂಗ್ ಸಂಪೂರ್ಣವಾಗಿದೆ. ಅಲ್ಲದೇ, ಮೇ 20ರವರೆಗೆ ಕೇದಾರನಾಥಗೆ ಹೆಲಿಕಾಪ್ಟರ್ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲಾಗಿದೆ. ಗಂಗೋತ್ರಿ, ಯಮುನೋತ್ರಿ ಮತ್ತು ಬದರಿನಾಥ್, ಕೇದಾರನಾಥನಲ್ಲಿ ಯಾತ್ರಾರ್ಥಿಗಳ ನಿಯಂತ್ರಣಕ್ಕಾಗಿ ಪ್ರತಿದಿನಕ್ಕೆ ಇಂತಿಷ್ಟು ಸಂಖ್ಯೆಯನ್ನು ನಿಗದಿಪಡಿಸಿದೆ.