ರಸ್ತೆ ದಾಟುವ ಆತುರ, ಬಳ್ಳಾರಿಯಲ್ಲಿ ಓರ್ವ ಸಾವು, ಇಬ್ಬರು ವಿದ್ಯಾರ್ಥಿಗಳು ಗಂಭೀರ - ಈಟಿವಿ ಭಾರತ್ ಕನ್ನಡ
ಬಳ್ಳಾರಿ: ರಸ್ತೆ ದಾಟುವಾಗ ಕಾರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬಳ್ಳಾರಿಯ ಹೊರವಲಯದ ಮಿಂಚೇರಿ ಬೈಪಾಸ್ ಬಳಿ ದುರ್ಘಟನೆ ನಡೆಯಿತು. ಚೌಡಯ್ಯ (38) ಮೃತಪಟ್ಟ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ವೇಗವಾಗಿ ಬರುತ್ತಿರುವುದನ್ನು ಗಮನಿಸದ ಬೈಕ್ ಸವಾರ ಚೌಡಯ್ಯ ರಸ್ತೆ ದಾಟಿ ಹೋಗುವ ಆತುರ ತೋರಿಸಿದ್ದಾನೆ. ಈ ಬೇಜವಾಬ್ದಾರಿಯೇ ಭೀಕರ ಅವಘಡಕ್ಕೆ ಕಾರಣವಾಗಿದೆ. ಶಾಲೆಗೆ ತೆರಳಲು ಲಿಫ್ಟ್ ಕೇಳಿದ್ದ ವಿದ್ಯಾರ್ಥಿಗಳನ್ನು ಚೌಡಯ್ಯ ಕರೆದುಕೊಂಡು ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.