ಟಾಮ್ ಅಂಡ್ ಜರಿ ಶಾಲೆಯಲ್ಲಿ ಸಂಕ್ರಾಂತಿ: ಮಕ್ಕಳಲ್ಲಿ ಗ್ರಾಮೀಣ ಸೊಗಡು ಮೂಡಿಸಿದ ಶಿಕ್ಷಕರು - ನಂತರ ಎಳ್ಳುಬೆಲ್ಲ ಹಂಚಿ ಸಂಭ್ರಮಿಸಿದರು
ನಗರದ ವಿದ್ಯಾನಗರದಲ್ಲಿರುವ ಟಾಮ್ ಅಂಡ್ ಜರಿ ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಗ್ರಾಮೀಣ ಸೊಗಡಿನ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಶಿಕ್ಷಣ ಸಂಸ್ಥೆಯವರು ಎತ್ತಿನಗಾಡಿ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗಮನಸೆಳೆದರು. ನಂತರ ಎಳ್ಳುಬೆಲ್ಲ ಹಂಚಿ ಸಂಭ್ರಮಿಸಿದರು. ಮೆರವಣಿಗೆಯ ಚಾಲನೆಯನ್ನು ವೃತ್ತ ನಿರೀಕ್ಷಕ ಕೃಷ್ಣರಾಜು ನೆರವೇರಿಸಿದರು.