ಕರುವಿನ ದೇಶಪ್ರೇಮ.. ತಿರಂಗಾ ಅಭಿಯಾನದಲ್ಲಿ ಹೆಜ್ಜೆ ಹಾಕಿದ ಕರು - ಈಟಿವಿ ಭಾರತ್ ಕನ್ನಡ
ಶಿವಮೊಗ್ಗ : ದೇಶವೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುವಾಗ ಕರುವೊಂದು ತಿರಂಗ ಅಭಿಯಾನದಲ್ಲಿ ಹೆಜ್ಜೆ ಹಾಕಿ ದೇಶ ಪ್ರೇಮ ಮೆರೆದಿದೆ. ಇಂದು ಶಿಕಾರಿಪುರ ತಾಲೂಕು ಚುರ್ಚುಗುಂಡಿಯಲ್ಲಿ ಕನ್ನಡ ಜಾಗೃತ ಸಮಿತಿ ಹಾಗೂ ಮೂರಾರ್ಜಿ ಶಾಲೆ ಶಿಕ್ಷಕರು ಗ್ರಾಮದಲ್ಲಿ ತಿರಂಗಾ ಜಾಗೃತಿ ಹಾಗೂ ಮನೆ ಮನೆಗೂ ರಾಷ್ಟ್ರಧ್ವಜ ನೀಡುತ್ತ ಸಾಗುವಾಗ ಇವರಿಗೆ ಕರುವೊಂದು ಅಚ್ಚರಿಯಾಗಿ ಸಾಥ್ ನೀಡಿದೆ. ಜಾಥವು ಗ್ರಾಮದ ಎ.ಕೆ.ಕಾಲೋನಿಯಿಂದ ಗ್ರಾಮದ ಹತ್ತು ಬೀದಿಗಳಲ್ಲಿ ತಿರಂಗಾ ಜಾಥ ಸಾಗಿತು.