ನಾನು ಸೋತಿದ್ದೇನೆ, ನನಗಿನ್ನೂ ಯಾವುದೇ ಒತ್ತಡ ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಿದ್ದಾರ್ಥ್ - ಸಿದ್ದಾರ್ಥ್
ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ್ ಹೆಗ್ಡೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೇ ಬರೆದಿರುವ ಪತ್ರವೊಂದು ದೊರೆತಿದೆ. 'ನಾನು ಸೋತಿದ್ದೇನೆ, ನಾನು ಜನರ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದೇನೆ. ನಾನು ಏನೇ ಮಾಡಿದರೂ ಕಂಪನಿಯನ್ನು ಲಾಭದಾಯಕ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ವಿಫಲನಾಗಿದ್ದೇನೆ' ಎಂದು ಸುಧೀರ್ಘ ಪತ್ರ ಬರೆದಿದ್ದಾರೆ. ನಿನ್ನೆ ಸಂಜೆಯಿಂದ ಮಂಗಳೂರಿನಲ್ಲಿ ಸಿದ್ದಾರ್ಥ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಅವರು ಬರೆದಿರುವ ಪತ್ರದ ಸಂರ್ಪೂರ್ಣ ಸಾರಾಂಶ ಇಲ್ಲಿದೆ.