ವಿಜಯನಗರ : ಪ್ರವಾಹವನ್ನು ಲೆಕ್ಕಿಸದೇ ಬಸ್ ಚಾಲನೆ - bus drived on flood at vijayanagara
ವಿಜಯನಗರ: ಹಳ್ಳದ ಪ್ರವಾಹವನ್ನು ಲೆಕ್ಕಿಸದೇ ಬಸ್ ಚಲಾಯಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಾಳ್ ತಿಮ್ಮಲಾಪುರ ನಡೆದಿದೆ. ರಸ್ತೆಯು ನೀರಿನಿಂದ ಆವೃತವಾಗಿದ್ದರೂ ಸಾರಿಗೆ ಬಸ್ ಚಲಾಯಿಸಿ ಚಾಲಕ ದುಸ್ಸಾಹಸ ಮೆರೆದಿದ್ದಾನೆ. ನಿರಂತರ ಮಳೆಯಿಂದಾಗಿ ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿದ್ದರೂ ಚಾಲಕ ಬಸ್ ಚಲಾಯಿಸಿದ್ದಾನೆ.