ಮಗುವಿಗಲ್ಲ, ಎಮ್ಮೆ ಕರುವಿಗೆ ಮುಡಿ ತೆಗೆಸಿದ ರೈತ: ವಿಡಿಯೋ ನೋಡಿ - ಎಮ್ಮೆ ಕರುವಿಗೆ ಮುಡಿ ತೆಗೆಸಿದ ರೈತ
ಯಾರೋ ಹಾಕಿದ ಶಾಪಕ್ಕೆ ಹುಟ್ಟಿದ ದನ ಕರುಗಳು ಕೆಲ ದಿನಗಳ ನಂತರ ಸಾವಿಗೀಡಾಗುತ್ತಿದ್ದವು. ಇದು ನಿಲ್ಲಬೇಕಾದರೆ ಕರುಗಳ ಕ್ಷೌರ ಮಾಡಿ, ಊರಿಗೆ ಊಟ ಹಾಕಿಸಿ ಎಂದು ಋಷಿಗಳು ಹೇಳಿದ್ದರಂತೆ. ಅದರಂತೆ ಉತ್ತರಪ್ರದೇಶದ ರೈತನೊಬ್ಬ ತನ್ನ ಮನೆಯಲ್ಲಿ ಹುಟ್ಟಿದ್ದ ಎಮ್ಮೆ ಕರುವಿನ ಕ್ಷೌರ ಮಾಡಿಸಿ ಇಡೀ ಊರಿಗೇ ಅನ್ನದಾನ ಮಾಡಿದ್ದಾನೆ. ಎಮ್ಮೆ ಕರುವನ್ನು ವಾದ್ಯ ಮೇಳದ ಸಮೇತ ಊರ ತುಂಬಾ ಮೆರವಣಿಗೆ ಮಾಡಿಸಿ, ಜನರನ್ನು ಊಟಕ್ಕೆ ಕರೆದಿದ್ದಾನೆ. ರೈತನ ಈ ವಿಚಿತ್ರ ಆಚರಣೆ ಎಲ್ಲರಲ್ಲೂ ಅಚ್ಚರಿ ಜೊತೆಗೆ ಮಾತಿಗೆ ವಿಷಯ ಸಿಕ್ಕಂತಾಗಿದೆ.