ನೋಡಿ: ನೀರವ್ ಮೋದಿ, ವಿಜಯ್ ಮಲ್ಯ ಬಗ್ಗೆ ಬ್ರಿಟನ್ ಪ್ರಧಾನಿ ಹೇಳಿದ್ದೇನು? - ವಿಜಯ್ ಮಲ್ಯ ಬಗ್ಗೆ ಬ್ರಿಟನ್ ಪ್ರಧಾನಿ ಉತ್ತರ
ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಪತ್ರಕರ್ತರೊಬ್ಬರು, ಭಾರತದಿಂದ ಪರಾರಿಯಾಗಿ ಲಂಡನ್ನಲ್ಲಿ ವಾಸವಾಗಿರುವ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಬಗ್ಗೆ ಕೇಳಿದ್ರು. ಇದಕ್ಕೆ ಪ್ರತಿಕ್ರಿಯಿಸಿರುವ ಬೋರಿಸ್, ಭಾರತದ ಕಾನೂನಿನಿಂದ ತಪ್ಪಿಸಿಕೊಂಡು ನಮ್ಮಲ್ಲಿ ಬಂದು ಉಳಿದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.