ವಿಶೇಷ ಹಾಡಿನ ಮೂಲಕ ಯೋಗ ದಿನ ಆಚರಿಸಿದ ಇಂಡೋ - ಟಿಬೇಟ್ ಗಡಿ ಪೊಲೀಸರು - ಇಂಡೋ ಟಿಬೇಟ್ ಗಡಿಯಲ್ಲಿ ಯೋಗ ದಿನ ಆಚರಣೆ
ಇಂದು ವಿಶ್ವ ಯೋಗ ದಿನದ ಪ್ರಯುಕ್ತ ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸ್ ಜವಾನರು ಯೋಗ ಕುರಿತಾದ ಹಾಡಿನ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಿದ್ದಾರೆ. ಲಡಾಖ್, ಹಿಮಾಚಲ ಪ್ರದೇಶ, ಭಾರತ - ಚೀನಾ ಗಡಿ ಸೇರಿದಂತೆ ಎತ್ತರದ ಹಿಮಾಲಯ ಪರ್ವತಗಳಲ್ಲಿ ಜವಾನರು ಯೋಗಾಸನ ಮಾಡುವ ಮೂಲಕ ಯೋಗದ ಕುರಿತದ ಮಹತ್ವವನ್ನು ಹಾಡಿನ ಮೂಲಕ ತಿಳಿಸಿಕೊಟ್ಟಿದ್ದಾರೆ. ಹಲವಾರು ವರ್ಷಗಳಿಂದ ಯೋಗ ದಿನವನ್ನು ಪೊಲೀಸ್ ಜವಾನರು ಆಚರಿಸುತ್ತಿದ್ದಾರೆ.