ತಂದೆಯ ಹುಟ್ಟುಹಬ್ಬ.. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ದೀಪಿಕಾ ಪಡುಕೋಣೆ - ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆ 67ನೇ ಹುಟ್ಟುಹಬ್ಬದ ಸಂದರ್ಭದಲ್ಲಿದ್ದು, ಈ ವೇಳೆ, ನಟಿ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಹೋದರಿ ಅನಿಶಾ, ತಂದೆ ಪ್ರಕಾಶ್ ಹಾಗೂ ತಾಯಿ ಉಜ್ವಲಾ ಜೊತೆ ಅವರು ದೇವಸ್ಥಾನಕ್ಕೆ ಆಗಮಿಸಿದ್ದು, ಬೆಳಗ್ಗೆ ವಿಐಪಿ ಸಾಲಿನಲ್ಲಿ ನಿಂತುಕೊಂಡು ಬಾಲಾಜಿ ದರ್ಶನ ಪಡೆದುಕೊಂಡರು. ತಂದೆಯ ಹುಟ್ಟುಹಬ್ಬದಂದು ಪ್ರತಿ ವರ್ಷ ದೀಪಿಕಾ, ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವುದು ವಿಶೇಷ. ಆದರೆ, ದೀಪಿಕಾ ಪತಿ ರಣವೀರ್ ಸಿಂಗ್ ಇವರೊಂದಿಗೆ ಬಂದಿರಲಿಲ್ಲ.