ಪ್ರಚಾರ ನಡೆಸ್ತಿದ್ದಾಗಲೇ ಕುಸಿದ ಬಿದ್ದ ಪಂಕಜಾ ಮುಂಡೆ... ವಿಡಿಯೋ! - ಮಹಾರಾಷ್ಟ್ರ ಸಚಿವೆ ಪಂಕಜಾ
ಮಹಾರಾಷ್ಟ್ರ ಚುನಾವಣೆಗಾಗಿ ಇದೇ ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರದ ಕೊನೆ ದಿನವಾದ ಕಾರಣ ಪ್ರಮುಖ ಮುಖಂಡರು ಬಿಡುವಿಲ್ಲದೇ ಕ್ಯಾಂಪೇನ್ಗಳಲ್ಲಿ ಭಾಗಿಯಾದ್ರು. ಇದರ ಮಧ್ಯೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ ಮುಂಡೆ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತು ಎಂದು ತಿಳಿದು ಬಂದಿದೆ.