ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್ - etv bharat kannada
ಬೆಂಗಳೂರು: ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವಾದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಎಂ.ಟಿ.ಬಿ ನಾಗರಾಜ್ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಸಖತ್ ಸ್ಟೆಪ್ ಹಾಕಿ ಕಾರ್ಯಕರ್ತರು, ಸಭಿಕರನ್ನು ರಂಜಿಸಿದರು. ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಾಯಕ ವಿಜಯ್ ಪ್ರಕಾಶ್ ಆರ್ಕೆಸ್ಟ್ರಾ ತಂಡದಿಂದ ಗೀತೆಗಳ ಗಾಯನ ನಡೆಸಲಾಯಿತು. ಇದೇ ವೇಳೆ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ ಹಾಡಿಗೆ ವೇದಿಕೆ ಮೇಲೆ ಸಚಿವ ಎಂಟಿಬಿ ನಾಗರಾಜ್ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಸಖತ್ ಸ್ಟೆಪ್ ಹಾಕಿದರು. ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಗೀತೆ ಮತ್ತು ಜೈ ಹೋ ಗೀತೆಗಳಿಗೆ ಕಾರ್ಯಕರ್ತರಿಂದ ಮತ್ತೆ ಮತ್ತೆ ಬೇಡಿಕೆ ಬಂದಿದ್ದು ವಿಶೇಷ.