ಬಿಜೆಪಿ ಸರ್ಕಾರ ಪತನ ಗ್ಯಾರಂಟಿ, 15 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ: ಈಶ್ವರ ಖಂಡ್ರೆ ಭವಿಷ್ಯ - ಮೈತ್ರಿ ಸರ್ಕಾರ
ಉಪ ಚುನಾವಣೆ ನಂತರ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡು ಪತನ ಆಗುವುದು ಗ್ಯಾರಂಟಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ 15ಕ್ಕೂ 15 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಆ 15 ಸ್ಥಾನಗಳಲ್ಲಿ ಅನರ್ಹ ಶಾಸಕರ ಮುಖ ನೋಡಿ ಮತದಾರರು ಮತ ಹಾಕುವುದಿಲ್ಲ. ಉಪಚುನಾವಣಾ ಕಣಗಳು ಕಾಂಗ್ರೆಸ್ನ ಭದ್ರಕೋಟೆ. ಹೀಗಾಗಿ ಆ ಸ್ಥಾನಗಳಲ್ಲಿ ಗೆಲುವು ನಮ್ಮದೇ ಎಂದರು.
Last Updated : Sep 28, 2019, 6:42 PM IST