ಮನುಷ್ಯರಂತೆ 15 ಕೆಜಿ ಕೇಕ್ ಕತ್ತರಿಸಿ ಆನೆಯ ಜನ್ಮದಿನ ಆಚರಿಸಿದ ಅರಣ್ಯಾಧಿಕಾರಿಗಳು: ವಿಡಿಯೋ - ಜಿಮ್ ಕಾರ್ಬೆಟ್ನಲ್ಲಿ ಆನೆಯ ಬರ್ತಡೇ
ಮನುಷ್ಯರಾದ ನಾವು ಜನ್ಮದಿನವನ್ನು ಕೇಕ್ ಕತ್ತರಿಸಿ, ಮತ್ತಿತರ ಕಾರ್ಯಕ್ರಮಗಳನ್ನು ಮಾಡಿ ಸಂಭ್ರಮ ಆಚರಿಸುತ್ತೇವೆ. ಅದೇ ರೀತಿ ಉತ್ತರಾಖಂಡದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಜಿಮ್ ಕಾರ್ಬೆಟ್ನಲ್ಲಿ ಸಫಾರಿ ಮತ್ತು ಅರಣ್ಯಾಧಿಕಾರಿಗಳಿಗೆ ನೆರವಾಗುವ ಆನೆಗಳ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಕರ್ನಾಟಕ ಮೂಲದ ಸಾವನ್ ಎಂಬ ಆನೆಗೆ 5 ವರ್ಷ ತುಂಬಿದ್ದು, ಈ ವೇಳೆ, ಅಲ್ಲಿನ ಅಧಿಕಾರಿಗಳು 15 ಕೆಜಿ ಕೇಕ್ ಕಟ್ ಮಾಡಿ ಅದಕ್ಕೆ ತಿನ್ನಿಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಬರ್ತಡೇ ಬಾಯ್ ಸಾವನ್ ಜೊತೆಗೆ ಇನ್ನೊಂದು ಆನೆಯನ್ನೂ ಶೃಂಗರಿಸಲಾಗಿತ್ತು. ಅಲ್ಲದೇ, ಬಣ್ಣಬಣ್ಣದ ಪೇಪರ್ ಮತ್ತು ಬಲೂನ್ಗಳಿಂದ ವೇದಿಕೆ ನಿರ್ಮಿಸಲಾಗಿತ್ತು. ಇಲ್ಲಿನ ಕಲಘರ್ ಆನೆ ಶಿಬಿರದಲ್ಲಿ 16 ಆನೆಗಳಿವೆ.