ರಸ್ತೆ ಬಂದ್ ಮಾಡಿ ಬರ್ತ್ಡೇ ಆಚರಣೆ, ಫೈರಿಂಗ್, ಸ್ವೇಚ್ಛಾಚಾರ : ವಿಡಿಯೋ ವೈರಲ್ - ಬಿಹಾರದಲ್ಲಿ ಹುಟ್ಟುಹಬ್ಬ ಆಚರಣೆ ವಿಡಿಯೋ ವೈರಲ್
ಬಿಹಾರದಲ್ಲಿ ಒಳ್ಳೆಯ ಸರ್ಕಾರ ಇದೆ ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ, ಪ್ರತಿದಿನವೂ ಸರ್ಕಾರ ಮತ್ತು ಪೊಲೀಸರಿಗೆ ಸವಾಲು ಹಾಕುವ ಅಪರಾಧಗಳೂ ಬೆಳಕಿಗೆ ಬರುತ್ತಿವೆ. ಇದೀಗ ಬಿಹಾರದ ರಾಜಧಾನಿ ಪಾಟ್ನಾದ ರಸ್ತೆಯಲ್ಲಿ ನಡೆದ ಸ್ವೇಚ್ಛಾಚಾರದ ವಿಡಿಯೋ ವೈರಲ್ ಆಗಿದೆ. ಪಾಟ್ನಾದಲ್ಲಿ ಮೇಲ್ಸೇತುವೆ ಜಾಮ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ವ್ಯಕ್ತಿಯೊಬ್ಬರು ಆಚರಿಸಿಕೊಂಡಿದ್ದಾರೆ. ಸಾಲುಗಟ್ಟಿದ ವಾಹನಗಳು ವೈರಲ್ ವಿಡಿಯೋದ ಜೊತೆಗೆ ಗನ್ ಫೈರಿಂಗ್ ಮಾಡಿ ಪಟಾಕಿಗಳನ್ನೂ ಸಿಡಿಸಲಾಗಿದೆ. ದಿಘಾ ಪೊಲೀಸ್ ಠಾಣೆ ಮತ್ತು ರೂಪಾಸ್‌ಪುರ ಪೊಲೀಸ್ ಠಾಣೆ ಸಮೀಪದಲ್ಲೇ ಈ ಬರ್ತ್ಡೇ ಆಚರಣೆ ನಡೆದಿದೆ ಎನ್ನಲಾಗ್ತಿದೆ..