ಪೊಲೀಸ್ ಠಾಣೆಯಲ್ಲಿ ಬಾಲಕನ ಹುಟ್ಟುಹಬ್ಬ ಆಚರಣೆ : ಮಗನ ಆಸೆ ಈಡೇರಿಸಿದ ಪೋಷಕರು - ದಕ್ಷ ಎಂಬ ಹೆಸರಿನ ಬಾಲಕ
ಪೊಲೀಸ್ ಠಾಣೆಯಲ್ಲಿಯೇ ಬಾಲಕನೋರ್ವನ ಹುಟ್ಟುಹಬ್ಬ ಆಚರಿಸಿರುವ ಘಟನೆ ಛತ್ತೀಸ್ಗಡದ ಜಗದಲ್ಪುರದಲ್ಲಿ ನಡೆದಿದೆ. ದಕ್ಷ ಎಂಬ ಹೆಸರಿನ ಬಾಲಕ ತನಗೆ ಪೊಲೀಸರೆಂದರೆ ತುಂಬಾ ಇಷ್ಟ ಅವರೊಂದಿಗೆಯೇ ನನ್ನ ಹುಟ್ಟುಹಬ್ಬ ಆಚರಿಸಬೇಕೆಂದು ಮನೆಯವರಲ್ಲಿ ಹೇಳಿದ್ದಾನೆ. ಹೀಗಾಗಿ ಆತನ ಪೋಷಕರು ಜಗದಲ್ಪುರದ ಠಾಣೆಗೆ ಆತನನ್ನು ಕರೆತಂದು ಅಲ್ಲೇ ಪೊಲೀಸರ ಜೊತೆಗೂಡಿ ಪುತ್ರನ ಹುಟ್ಟುಹಬ್ಬ ಆಚರಿಸಿದ್ದಾರೆ.