ಡಿಬಾಸ್ ಡಿಬಾಸ್ ಡಿಬಾಸ್: ಮಳೆಯಲ್ಲಿ ಕ್ರಾಂತಿ ಪೋಸ್ಟರ್ ಹಿಡಿದು ಅಭಿಮಾನಿಗಳಿಂದ ಬೈಕ್ ರ‍್ಯಾಲಿ - ಡಿ ಬಾಸ್ ಅಭಿಮಾನಿಗಳಿಂದ ಬೈಕ್ ರ್ಯಾಲಿ
ಶಿವಮೊಗ್ಗ: ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಡಿ ಬಾಸ್ ದರ್ಶನ್ ಅಭಿಮಾನಿ ಬಳಗದಿಂದ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಪೋಸ್ಟರ್ ಹಿಡಿದು ಬೈಕ್ ರ‍್ಯಾಲಿ ನಡೆಸಲಾಯಿತು. ಚಂದ್ರಗುತ್ತಿಯ ಗಣಪತಿ ದೇವಸ್ಥಾನದಿಂದ ರೇಣುಕಾಂಬ ದೇವಸ್ಥಾನದ ವರೆಗೆ ರ‍್ಯಾಲಿ ನಡೆಸಿ, ಪೂಜೆ ಸಲ್ಲಿಸಲಾಯಿತು. ನಂತರ ಚನ್ನಪಟ್ಟಣ, ನ್ಯಾರ್ಸಿ, ಯಡಗೊಪ್ಪ ಗ್ರಾಮಗಳಲ್ಲೂ ಬೈಕ್ ರ‍್ಯಾಲಿ ಸಂಚರಿಸಿತು. ದರ್ಶನ್ ಅವರ ಭಾವಚಿತ್ರವನ್ನು ಟ್ರ್ಯಾಕ್ಟರ್ಲ್ಲಿ ಮೆರವಣಿಗೆ ಮಾಡಲಾಯಿತು.