ವೇಗದಲ್ಲಿ ಬಂದು ಪಲ್ಟಿಯಾಗಿ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ ಬೈಕ್.. ಸವಾರ ಪಾರು- ವಿಡಿಯೋ - ಸಿನಿಮೀಯ ರೀತಿಯಲ್ಲಿ ಬೈಕ್ ಅಪಘಾತ
ಇಡುಕ್ಕಿ (ಕೇರಳ): ಕೇರಳದಲ್ಲಿ ಸಿನಿಮೀಯ ರೀತಿಯಲ್ಲಿ ಬೈಕ್ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಬೈಕ್ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದು ನೇರವಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಹೋಗಿ ಕುಳಿತಿದೆ. ಅದೃಷ್ಟವಶಾತ್ ಅಥವಾ ಸವಾರನ ಆಯಸ್ಸು ಗಟ್ಟಿ ಇರುವ ಕಾರಣಕ್ಕೋ ಬೈಕ್ ಮೇಲಕ್ಕೆ ಹಾರುವಾಗ ಆತ ಬೈಕ್ನೊಂದಿಗೆ ಹೋಗದೆ ಕೆಳಗಡೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಡುಕ್ಕಿಯ ಕಟ್ಟಪ್ಪನ ವೆಲ್ಲಯಂಕುಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಟ್ರಾನ್ಸ್ಫಾರ್ಮರ್ನಿಂದ ಬೈಕ್ ಹೊರತೆಗೆಯಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.