ಪಡಿತರ ಅಕ್ಕಿ ತುಂಬಿದ್ದ ಲಾರಿ ಬಿಜಾಪುರದ ನಾಲೆಯಲ್ಲಿ ಕೊಚ್ಚಿಹೋಯ್ತು.. - ಛತ್ತೀಸ್ ಗಡದ ಬಿಜಾಪುರದಲ್ಲಿ ನಾಲೆಯಲ್ಲಿ ಕೊಚ್ಚಿ ಹೋದ ಲಾರಿ
ಛತ್ತೀಸ್ಗಡ್: ಬಿಜಾಪುರ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ನಾಲೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಿಂದ ಪಡಿತರ ಅಕ್ಕಿಯನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಭೂಪಾಲಪಟ್ಟಣಂನ ಮೆಟ್ಟುಪಲ್ಲಿ ಗ್ರಾಮದಲ್ಲಿ ಭಾರಿ ಮಳೆಗೆ ನಾಲೆಯಲ್ಲಿ ಕೊಚ್ಚಿಹೋಗಿದೆ. ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ಹೇಳಲಾಗಿದೆ. ಆದರೆ ಅಪಘಾತದಲ್ಲಿ ಚಾಲಕ ಪಾರಾಗಿದ್ದಾನೆ. ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಲಾರಿ ಮುಳುಗಿರುವುದಾಗಿ ಹೇಳಲಾಗ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು, ತಹಶಿಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದಾಗಿ ಅವಪಲ್ಲಿ, ಭೋಪಾಲ್ ಪಾಟ್ನಾ, ಬಿಜಾಪುರ ಸೇರಿದಂತೆ ಭೈರಾಮಗಢದಲ್ಲಿ ನದಿಯ ನಾಲೆಗಳು ಉಕ್ಕಿ ಹರಿಯುತ್ತಿವೆ. ಲಾರಿ ಮುಳುಗುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.