ಬರೋಬ್ಬರಿ ₹3.10 ಲಕ್ಷಕ್ಕೆ ಮಾರಾಟಗೊಂಡ ಮೀನು.. ಏನ್ ವಿಶೇಷತೆ!? - ಈಟಿವಿ ಭಾರತ
ಭದ್ರಕ್(ಒಡಿಶಾ): ಇಲ್ಲಿನ ಚಾಂದಬಾಲಿಯ ಚಾಂದಿನಿಪಾಲ ಮೀನು ಹರಾಜು ಕೇಂದ್ರದಲ್ಲಿ ಮೀನೊಂದು ಬರೋಬ್ಬರಿ 3.10 ಲಕ್ಷ ರೂಪಾಯಿಗೆ ಮಾರಾಟಗೊಂಡಿದೆ. ಧಮ್ರಾ ನದಿಯಲ್ಲಿ ಸಿಕ್ಕಿರುವ ಈ ವಿಶೇಷ ಮೀನು ಔಷದೀಯ ಗುಣ ಹೊಂದಿದೆ. ಹೀಗಾಗಿ, ಮುಂಬೈನ ಫಾರ್ಮಾಸ್ಯುಟಿಕಲ್ ಕಂಪನಿಗೆ ಇಷ್ಟೊಂದು ಹಣಕ್ಕೆ ಮಾರಾಟಗೊಂಡಿದೆ. ಈ ಮೀನಿಗೆ ಘೋಲ್ ಅಥವಾ ಪ್ರೋಟೊನಿಬಿಯಾ ಡಯಾಕಾಂಥಸ್ ಎಂದು ಕರೆಯಲಾಗ್ತದೆ. ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಸೇರಿರುವ ಮೀನುಗಳ ಜಾತಿಯಾಗಿದೆ.