ಬೆಂಗಳೂರು ಗಲಭೆ ಪೂರ್ವ ನಿಯೋಜಿತ..?: ವಿಡಿಯೋ ವೈರಲ್..! - ಡಿಜೆ ಹಳ್ಳಿ
ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ದಾಂಧಲೆ ಪ್ರಕರಣ ಪೂರ್ವ ನಿಯೋಜಿತವಾ? ಎಂಬುವ ಪ್ರಶ್ನೆ ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿದೆ. ಗಲಭೆ ಪೂರ್ವ ನಿಯೋಜಿತ ಎಂಬ ಅನುಮಾನಗಳಿಗೆ ಪುಷ್ಠಿ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಲಭೆ ನಡೆಯೋದಕ್ಕೆ ಮೊದಲು ಡಿ.ಜೆ.ಹಳ್ಳಿಯ ಪ್ಯಾರಲಲ್ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತುಕೊಂಡ ಕಿಡಿಗೇಡಿಗಳಿಂದ ಹಣ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.