ಕರ್ನಾಟಕ

karnataka

ETV Bharat / videos

ಬೆಂಗಳೂರಿನ ಈ ದುಸ್ಥಿತಿಗೆ ಕಾಂಗ್ರೆಸ್​ ದುರಾಡಳಿತವೇ ಕಾರಣ: ಸಿಎಂ ಬೊಮ್ಮಾಯಿ - ಈಟಿವಿ ಭಾರತ ಕರ್ನಾಟಕ

By

Published : Sep 6, 2022, 1:42 PM IST

ಬೆಂಗಳೂರು: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಾರ್ಭಟ ಜೋರಾಗಿದೆ. ದಾಖಲೆಯ ಮಳೆಗೆ ಮಹಾನಗರಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಈ ಹಿಂದಿನ ಕಾಂಗ್ರೆಸ್​ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರಿನಲ್ಲಿ ಈ ಸ್ಥಿತಿ ನಿರ್ಮಾಣಗೊಳ್ಳಲು ಹಿಂದಿನ ಕಾಂಗ್ರೆಸ್ ನೇರ ಕಾರಣ, ಅವರ ಆಡಳಿತ ಅವಧಿಯಲ್ಲಿ ನಗರದ ಕೆರೆ ಒಳಭಾಗ, ಕರೆ ಸುತ್ತಲಿನ ನಿರ್ಬಂಧಿತ ಪ್ರದೇಶ ಹಾಗೂ ರಾಜಕಾಲುವೆಗಳ ಮೇಲೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಕಟ್ಟಡ ತೆರವು ಕಾರ್ಯ ಆರಂಭಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗದಂತೆ ಕೆಲಸ ಮಾಡಲಾಗ್ತಿದೆ ಎಂದರು. ಜೊತೆಗೆ ಎಲ್ಲ ಕೆಲಸಕ್ಕೂ ಹಣ ರಿಲೀಸ್ ಮಾಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡರು.

ABOUT THE AUTHOR

...view details