ಬಾರಾಮುಲ್ಲಾ ಗ್ರೆನೇಡ್ ದಾಳಿ: ರಾಷ್ಟ್ರೀಯ ಹೆದ್ದಾರಿ ತಡೆದು ಮೃತನ ಕುಟುಂಬಸ್ಥರಿಂದ ಪ್ರತಿಭಟನೆ - National Highway blocked
ಜಮ್ಮು ಮತ್ತು ಕಾಶ್ಮೀರ: ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದ್ದ ವೈನ್ ಶಾಪ್ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದರು. ಘಟನೆಯಲ್ಲಿ ಬಕ್ರ ರಾಜೌರಿ ನಿವಾಸಿ ಕಿಶನ್ ಲಾಲ್ ಪುತ್ರ ರಂಜಿತ್ ಸಿಂಗ್ (52) ಸಾವನ್ನಪ್ಪಿದ್ದು, ನಾಲ್ವರು ನೌಕರರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ರವಿ ಕುಮಾರ್(36), ಕಾಂತೂ, ಗೋವಿಂದ್ ಸಿಂಗ್ ಹಾಗೂ ಗೋವಿಂದ್ರ ಸಿಂಗ್(35) ಎಂದು ಗುರುತಿಸಲಾಗಿದೆ. ಇಂದು ರಾಜೌರಿ ಬಳಿಯ ಬಕ್ರದಲ್ಲಿ ಮೃತನ ಕುಟುಂಬಸ್ಥರು, ಸಂಬಂಧಿಕರು ಜಮ್ಮು- ರಜೌರಿ ಪೂಂಚ್ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು.