ಉಮಾರಿಯಾದ ಕೊಳದಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು: ವಿಡಿಯೋ - ಕೊಳದಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು
ಉಮಾರಿಯಾ(ಮಧ್ಯಪ್ರದೇಶದ): ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಖಿತೌಲಿ ಗೇಟ್ ಬಳಿ ಪ್ರವಾಸಿಗರು ವಿಶೇಷ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಬಿಸಿಲ ತಾಪದಿಂದ ಮುಕ್ತಿ ಪಡೆಯಲು ಖಿತೌಲಿ ಗೇಟ್ ಬಳಿಯ ಕೊಳಕ್ಕೆ ಕಾಡು ಪ್ರಾಣಿಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಆನೆಗಳು ಮತ್ತು ಕೆಲವೊಮ್ಮೆ ಇತರ ಪ್ರಾಣಿಗಳ ಬರುವ ವಿಡಿಯೋಗಳು ಇಲ್ಲಿ ವೈರಲ್ ಆಗುತ್ತವೆ. ಈ ಬಾರಿ ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಬಿಸಿಲ ತಾಪದಿಂದ ಮುಕ್ತಿ ಪಡೆಯಲು ಆನೆಗಳು ಕೊಳದಲ್ಲಿ ಸ್ನಾನ ಮಾಡಿ ಸೊಂಡಿಲಿನಿಂದ ಪರಸ್ಪರ ನೀರು ಎರಚುತ್ತಾ ದಗೆ ತಣಿಸಿಕೊಂಡಿವೆ.