ಬಹು ನಿರೀಕ್ಷಿತ 'ಬೈರಾಗಿ' ಚಿತ್ರ ಬಿಡುಗಡೆ: ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮ - ಬೈರಾಗಿ ಸಿನಿಮಾ
ದಾವಣಗೆರೆ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ 'ಬೈರಾಗಿ' ಸಿನಿಮಾ ಇಂದು ಬಿಡುಗಡೆಯಾಗಿದೆ. ಬೆಳಗ್ಗೆಯಿಂದಲೇ ದಾವಣಗೆರೆಯ ಆಶೋಕ - ಚಿತ್ರಮಂದಿರಕ್ಕೆ ಧಾವಿಸಿದ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾವನ್ನ ಕಣ್ತುಂಬಿಕೊಂಡರು. ಚಿತ್ರ ಆರಂಭಕ್ಕೂ ಮುನ್ನ ಶಿವಣ್ಣನ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಹೂವಿನ ಹಾರ ಹಾಕುವ ಮೂಲಕ ಶತದಿನೋತ್ಸವ ಪೂರೈಸಲೆಂದು ಹಾರೈಸಿ ಕುಂಬಳಕಾಯಿ, ತೆಂಗಿನಕಾಯಿ ಒಡೆದರು.