ಕರ್ನಾಟಕ

karnataka

ETV Bharat / videos

ಬಾಗಲಕೋಟೆ: ನದಿಯಿಂದ ಜಮೀನಿಗೆ ಬಂದಿದ್ದ ಮೊಸಳೆ ಸೆರೆ - crocodile captured on a farm at Bagalkot

By

Published : Apr 27, 2022, 4:19 PM IST

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೊನೆಯ ಗ್ರಾಮವಾಗಿರುವ ರಾಮಥಾಳ ಬಳಿ ಮೊಸಳೆಯೊಂದು ಪತ್ತೆಯಾಗಿದೆ. ಗ್ರಾಮದ ಪಕ್ಕದಲ್ಲಿಯೇ ಮಲ್ಲಪ್ರಭಾ ನದಿ ಹರಿಯುತ್ತದೆ. ನದಿಯ ಮೂಲಕ ಮೊಸಳೆ ರಾತ್ರಿ ಸಮಯದಲ್ಲಿ ಜಮೀನಿಗೆ ನುಗ್ಗಿದ್ದು ಬೆಳಗಿನ ಜಾವ ಜಮೀನಿಗೆ ಬಂದ ರೈತರಿಗೆ ಕಂಡಿದೆ. ಅರಣ್ಯ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದು, ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಕೃಷ್ಣಾ ನದಿಯಲ್ಲಿ ‌ಮೊಸಳೆಗಳು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇದೇ ಮೊದಲ ಬಾರಿಗೆ ಮಲ್ಲಪ್ರಭಾ ನದಿಯಲ್ಲಿ ಕಾಣಿಸಿಕೊಂಡಿದೆ. ಹುನಗುಂದ ಹಾಗೂ ಗುಳೇದಗುಡ್ಡ ತಾಲೂಕಿನ ವ್ಯಾಪ್ತಿಯಲ್ಲಿ ಮೊಸಳೆ ಕಂಡು‌ ಬಂದಿರುವುದು ಈ ಭಾಗದ ಜನತೆಯಲ್ಲಿ ಆತಂಕ ಮೂಡಿಸಿದೆ.

ABOUT THE AUTHOR

...view details