ದುಷ್ಕರ್ಮಿಗಳ ಅಟ್ಟಹಾಸ: ವಿಧವೆ ಬೆಳೆಸಿದ್ದ ಅಡಿಕೆ ಗಿಡಗಳಿಗೆ ಕೊಡಲಿ ಪೆಟ್ಟು - ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಪತಿಯನ್ನು ಕಳೆದುಕೊಂಡಿದ್ದ ಆ ಮಹಿಳೆ ತನ್ನ ಮಗನೊಂದಿಗೆ ಹಗಲಿರುಳೆನ್ನದೆ ಜಮೀನಿನಲ್ಲಿ ದುಡಿದು ಅಡಿಕೆ ಗಿಡ ಬೆಳೆಸಿದ್ದಳು. ಇನ್ನೆರಡು ವರ್ಷಗಳಲ್ಲಿ ಅಡಿಕೆ ಫಸಲು ನೀಡಲು ಸಿದ್ಧವಾಗಿತ್ತು. ಆದ್ರೆ ಅದ್ಯಾವ ಕಿಡಿಗೇಡಿಗಳ ಕಣ್ಣು ಬಿತ್ತೋ ಗೊತ್ತಿಲ್ಲಾ.., ರಾತ್ರೋರಾತ್ರಿ ಅಡಿಕೆ ಗಿಡಗಳು ನೆಲಕ್ಕುರುಳಿ ಬಿದ್ದವು. ಇದೀಗ ಬೆಳೆ ಕಳೆದುಕೊಂಡ ಮಹಿಳೆ ಕಣ್ಣೀರಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ಎದುರಾಗಿದೆ.