ಆಟೋ ಎಕ್ಸ್‌ಪೋ 2020: ಮಾರುಕಟ್ಟೆಗೆ ಲಗ್ಗೆಯಿಟ್ಟ ಚೀನದ ಹೈಮಾ 8 ಎಸ್ಎಸ್‌ಯುವಿ - ಎಕ್ಸ್‌ಪೋದಲ್ಲಿ ಗ್ರೇಟ್ ವಾಲ್ ಮೋಟಾರ್ಸ್
ದೆಹಲಿ: ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್‌ಪೋ 2020ರಲ್ಲಿ ಚೀನಾದ 5 ದೊಡ್ಡ ಕಂಪನಿಗಳಲ್ಲಿ ಒಂದಾದ ಹೈಮಾ ಆಟೋ ಮೊಬೈಲ್ ಕಂಪನಿ, ಹೈಮಾ 8 ಎಸ್ಎಸ್‌ಯುವಿ ಎಂಬ ಕಾರನ್ನು ಪ್ರದರ್ಶಿಸಿತು. ಟಾಟಾ ಇನ್ನೋವಾ, ಹ್ಯುಂಡೈನ ಕ್ರೆಟಾ, ಎಂಜಿ ಹೆಕ್ಟರ್ ಅನ್ನು ಟಾಟಾ ಹ್ಯಾರಿಯರ್ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯು ಕೈಗೆಟುಕುವ ದರದಲ್ಲಿ ಇವಿ ಹ್ಯಾಚ್‌ಬ್ಯಾಕ್ ಬರ್ಡ್ ಎಲೆಕ್ಟ್ರಿಕ್ ಇವಿ 1 ಕಾರನ್ನು ಭಾರತದಲ್ಲಿ ಪರಿಚಯಿಸಿದೆ. ಇದರ ಬೆಲೆ 10 ಲಕ್ಷಕ್ಕಿಂತ ಕಡಿಮೆ ಎಂದು ಹೈಮಾ ಕಂಪನಿಯ ವಕ್ತಾರ ಅಬ್ರಹಾಂ ಹೇಳಿದ್ದಾರೆ.