ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ರು.. ಕುಟುಂಬವನ್ನು ಸಜೀವವಾಗಿ ಸುಟ್ಟು ಹಾಕಲು ಕಿರಾತಕರ ಯತ್ನ - ಸಿಸಿಟಿವಿಯಲ್ಲಿ ಭಯಾನಕ ದೃಶ್ಯ
ಬಿಲಾಸ್‌ಪುರ (ಛತ್ತೀಸ್ಗಢ): ಐದು ಜನರಿದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಇಡೀ ಕುಟುಂಬವನ್ನೇ ಸಜೀವವಾಗಿ ಸುಟ್ಟು ಹಾಕಲು ಯತ್ನಿಸಿದ ಆಘಾತಕಾರಿ ಘಟನೆ ಛತ್ತೀಸ್ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪೆಟ್ರೋಲ್ ತಂದು ಮನೆಯ ಎಲ್ಲ ಬಾಗಿಲು, ಕಿಟಕಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಂಕಿ ಹಬ್ಬಿದ ತಕ್ಷಣವೇ ಎಚ್ಚರಗೊಂಡ ಮನೆಯವರು ಧೈರ್ಯದಿಂದ ತಾವೇ ನೀರಿನಿಂದ ನಂದಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಸಂಪೂರ್ಣ ಕೃತ್ಯ ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಬಗ್ಗೆ ಮನೆಯ ಯಜಮಾನಿ ರೇಖಾ ಸಿಂಗ್ ದೂರು ನೀಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.