ಕರ್ನಾಟಕ

karnataka

ETV Bharat / videos

ಮೇವು ನೀಡಿ ಎಂದು ಮಾವುತರಿಗೆ ಸನ್ನೆ ಮಾಡಿದ ಅರ್ಜುನ: ವಿಡಿಯೋ - ಈಟಿವಿ ಭಾರತ್​ ಕನ್ನಡ

By

Published : Aug 24, 2022, 4:55 PM IST

ಮೈಸೂರು : ಜಂಬೂಸವಾರಿಯ ಮಾಜಿ ಕ್ಯಾಪ್ಟನ್ ಅರ್ಜುನ ಆನೆ(63 ವರ್ಷ) ಅರಮನೆಯ ಆನೆ ಶಿಬಿರದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಈ ಬೃಹತ್ ಗಾತ್ರದ ಅರ್ಜುನ ಶಿಬಿರದಲ್ಲಿ ಮಾವುತರಿಗೆ ಮೇವು ನೀಡಿ ಎಂದು ತನ್ನ ಕಾಲಿಗೆ ಕಟ್ಟಿರುವ ಸರಪಳಿಯನ್ನು ಹಿಡಿದು ಶಬ್ದ ಮಾಡಿ, ಜೊತೆಗೆ ಕೊರಳಿಗೆ ಹಾಕಿದ ಗಂಟೆಯಿಂದಲೂ ಸಹಾ ಸನ್ನೆ ಮಾಡಿ ಮೇವು ಹಾಕುವಂತೆ ಕೇಳುತ್ತದೆ. ಅರ್ಜುನ ಆನೆ 9 ಆನೆಗಳಲ್ಲಿ ದೊಡ್ಡ ಹಾಗೂ ಆಕರ್ಷಣೀಯ ಆನೆಯಾಗಿದ್ದು, ಶಿಬಿರದಲ್ಲಿ ತನ್ನ ವಿಶಿಷ್ಟ ವರ್ತನೆಗಳ ಮೂಲಕ ಗಮನ ಸೆಳೆಯುತ್ತಿದೆ.

ABOUT THE AUTHOR

...view details