ವಿದ್ಯಾಸಾಗರ ತೀರ್ಥ ಶ್ರೀಳಿಂದ ಕೃಷ್ಣನಿಗೆ ಅರ್ಘ್ಯ ಪ್ರದಾನ..ವಿಡಿಯೋ - ಉಡುಪಿಯ ಕೃಷ್ಣ ಮಠ
ಉಡುಪಿ: ಕೃಷ್ಣಜನ್ಮಾಷ್ಟಮಿ ಹಿನ್ನೆಲೆ ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಹಾಲು ಹಾಗೂ ನೀರಿನ ಮೂಲಕ ಚಂದ್ರನಿಗೆ ಹಾಗೂ ಕೃಷ್ಣ ದೇವರಿಗೆ ಅರ್ಘ್ಯ ಸಮರ್ಪಣೆ ಮಾಡಲಾಯಿತು. ಅರ್ಘ್ಯ ಸಮರ್ಪಣೆ ಬಳಿಕ ಉಂಡೆ ಚಕ್ಕುಲಿಗಳನ್ನ ಶ್ರೀಕೃಷ್ಣನಿಗೆ ಅರ್ಪಿಸಲಾಯಿತು. ಹಗಲಿಡಿ ಉಪವಾಸ ಇದ್ದ ಭಕ್ತರು ಮಹಾಮಂಗಳಾರತಿ ಬಳಿಕ ಶ್ರೀ ಕೃಷ್ಣನಿಗೆ ಅರ್ಘ್ಯ ಸಮರ್ಪಿಸಿದರು. ಈ ವೇಳೆ, ಖಳ ನಟ ರವಿಶಂಕರ್ ಶ್ರೀ ಕೃಷ್ಣನ ದರ್ಶನ ಪಡೆದರು. ಇಂದು ಮಧ್ಯಾಹ್ನ ರಥಬೀದಿಯಲ್ಲಿ ಶ್ರೀ ಕೃಷ್ಣನ ವೈಭವದ ಲೀಲೋತ್ಸವ ವಿಟ್ಲಪಿಂಡಿ ಜರುಗಲಿದೆ.