ದಾವಣಗೆರೆಯಲ್ಲಿ ಅಡಿಕೆ ತೋಟ ಜಲಾವೃತ.. ರೈತನಿಗೆ ಸಂಕಷ್ಟ - ಜಿಲ್ಲಾಧಿಕಾರಿ ಶಿವಾನಂದ ಕಪಾಶಿ
ದಾವಣಗೆರೆ ತಾಲೂಕಿನ ಅಣಜಿ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ಹಿನ್ನೀರಿನಲ್ಲಿರುವ ಫಸಲಿಗೆ ಬಂದ 300 ಎಕರೆ ಅಡಿಕೆ ತೋಟ ಜಲಾವೃತವಾಗಿದೆ. ಪರಿಣಾಮ ರೈತರು ನಡುಮಟ್ಟದ ನೀರಿನಲ್ಲೇ ನಿಂತು ಅಡಿಕೆ ಕೊಯ್ಲು ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಣಜಿ ಗ್ರಾಮದ ಬಳಿಯ ಕೆರೆಯಾಗಲಹಳ್ಳಿಯ ಜಮೀನುಗಳು ಅಣಜಿ ಕೆರೆಯ ಹಿನ್ನೀರಿನಿಂದ ಜಲಾವೃತ ಆಗಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಯಾವೊಬ್ಬ ಅಧಿಕಾರಿ ಕೂಡ ಇತ್ತ ಸುಳಿದಿಲ್ಲವಂತೆ. ಹೀಗಾಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಇನ್ನು, ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರನ್ನು ಭೇಟಿಯಾಗಲು ಪ್ರಯತ್ನಿಸಿದರೂ ಕೂಡ ಡಿಸಿ ಮಾತ್ರ ರೈತರಿಗೆ ಸಿಕ್ಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.