ಭಾವೈಕ್ಯತೆಯ ಸಂಕೇತ.. ಆಂಜನೇಯ ಸ್ವಾಮಿ ರಥ ಎಳೆದ ಹಿಂದೂ-ಮುಸ್ಲಿಂ ಬಾಂಧವರು - ತುಮಕೂರಿನಲ್ಲಿ ಆಂಜನೇಯ ರಥ ಎಳೆದ ಹಿಂದೂ ಮುಸ್ಲಿಂ ಬಾಂಧವರು
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ಮಾರ್ಗ ಮಧ್ಯೆ ಸಿಕ್ಕ ಮಸೀದಿ ಬಳಿ ಜಮಾಯಿಸಿದ್ದ ಮುಸ್ಲಿಂ ಬಾಂಧವರು ಆಂಜನೇಯ ಸ್ವಾಮಿಗೆ ವಿಶೇಷ ಅರ್ಚನೆ ಮಾಡಿಸಿದರು. ಅಲ್ಲದೆ ಆಂಜನೇಯ ಸ್ವಾಮಿ ರಥವನ್ನು ಎಳೆಯಲು ಮುಸ್ಲಿಮರು ಕೂಡ ಸಾಥ್ ನೀಡಿದ್ದು, ವಿಶೇಷವಾಗಿತ್ತು. ಹಾಗಲವಾಡಿ ಪಾಣೆಗಾರರು ಆಳ್ವಿಕೆ ನಡೆಸಿದ ಐತಿಹಾಸಿಕ ನೆಲೆಯಾಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಹಳೆಯೂರು ಆಂಜನೇಯ ಹಾಗೂ ತಾತಯ್ಯನವರ ಭಾವೈಕ್ಯದ ಸಂಕೇತವಾಗಿದೆ ಈ ಉತ್ಸವ. ತಲೆತಲಾಂತರದಿಂದಲೂ ಆಂಜನೇಯ ಸ್ವಾಮಿ ಉತ್ಸವದಲ್ಲಿ ಮುಸ್ಲಿಮರು ಕೂಡ ಭಾಗಿಯಾಗುವುದು ಸದ್ದಿಲ್ಲದೆ ನಡೆದುಕೊಂಡು ಬಂದಿದೆ.