ಅಂಗನವಾಡಿ ಕಾರ್ಯಕರ್ತೆಯರ 'ಬೆಂಗಳೂರು ಚಲೋ'ಗೆ ತುಮಕೂರಿನಲ್ಲಿ ಪೊಲೀಸರಿಂದ ತಡೆ - Tumkur Protest News
ತುಮಕೂರು: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಮ್ಮಿಕೊಂಡಿದ್ದ 'ಬೆಂಗಳೂರು ಚಲೋ'ಗೆ ಪೊಲೀಸರು ತುಮಕೂರಿನಲ್ಲಿ ತಡೆಯೊಡ್ಡಿದರು. ಇಲ್ಲಿನ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ಗಾಜಿನ ಮನೆಗೆ ಪೊಲೀಸರು ಸ್ಥಳಾಂತರಿಸಿದ್ರು. ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪೋಲಿಸ್ ಬಲವನ್ನು ಬಳಸಿಕೊಂಡಿದೆ ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆರೋಪಿಸಿದರು. ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜನರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.