ಕರ್ನಾಟಕ

karnataka

ETV Bharat / videos

ಕೋಡಿ ಬಿದ್ದ ಅಣಜಿ ಕೆರೆ.. ಜಗಳೂರು-ದಾವಣಗೆರೆ ರಸ್ತೆ ಬಂದ್, ಮಾರ್ಗ ಬದಲಾವಣೆ - ದಾವಣಗೆರೆ ತಾಲೂಕಿನ ಅಣಜಿ ಕೆರೆ

By

Published : Oct 15, 2022, 2:59 PM IST

ದಾವಣಗೆರೆ: ಜಿಲ್ಲೆಯ ಚನ್ನಗಿರಿ, ಜಗಳೂರು, ದಾವಣಗೆರೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು, ಕೆರೆ, ಹಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ದಾವಣಗೆರೆ ತಾಲೂಕಿನ ಅಣಜಿ ಕೆರೆ ಭರ್ತಿಯಾಗಿ ರಸ್ತೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಹೀಗಾಗಿ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಜಗಳೂರಿನಿಂದ ದಾವಣಗೆರೆಗೆ ಬರುವ ಬಸ್​ಗಳು ಬಸವನಕೋಟೆ ಮೇಲೆ ಬರಬೇಕಿದೆ. ದಾವಣಗೆರೆಯಿಂದ ತೆರಳಬೇಕಾದ ಬಸ್​ಗಳು ಭರಮಸಾಗರ ಮೂಲಕ ಜಗಳೂರು ತಲುಪಬೇಕಾಗಿದೆ. ಅಣಜಿ ಕೆರೆ ಕೋಡಿ ಬಿದ್ದು ಹರಿಯುತ್ತಿದ್ದು, ಅಕ್ಕಪಕ್ಕದ ಗ್ರಾಮಗಳಿಗೆ ನೀರು ನುಗ್ಗಿದೆ. ಹಿನ್ನೀರಿನ ಜಮೀನು ಜಲಾವೃತವಾಗಿದ್ದು, ಅಡಿಕೆ, ಭತ್ತ ಹತ್ತಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ.

ABOUT THE AUTHOR

...view details