ಕರ್ನಾಟಕ

karnataka

ETV Bharat / videos

ಹದಗೆಟ್ಟ ರಸ್ತೆಯ ಗುಂಡಿಯಲ್ಲಿ ಸಿಲುಕಿದ ಆ್ಯಂಬುಲೆನ್ಸ್​: ಮಾರ್ಗಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಮಹಿಳೆ - Etv Bharat Kannada

By

Published : Aug 4, 2022, 3:19 PM IST

Updated : Aug 4, 2022, 3:32 PM IST

ಬಸ್ತಿ (ಉತ್ತರ ಪ್ರದೇಶ): ಹದಗೆಟ್ಟ ರಸ್ತೆಯಲ್ಲಿ ಆ್ಯಂಬುಲೆನ್ಸ್ ಮುಂದೆ ಚಲಿಸಲು ಸಾಧ್ಯವಾಗದೇ ಗರ್ಭಿಣಿಯೊಬ್ಬರು ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ದುಬುಲಿಯಾ ಪ್ರದೇಶದಿಂದ ಆಂಬ್ಯುಲೆನ್ಸ್​ನಲ್ಲಿ ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಆಸ್ಪತ್ರೆಗೆ ತೆರಳುವ ರಸ್ತೆ ಹದಗೆಟ್ಟಿದ್ದರಿಂದ ಆ್ಯಂಬುಲೆನ್ಸ್ ಗುಂಡಿಯಲ್ಲೇ ಸಿಲುಕಿಕೊಂಡಿದೆ. ಆ್ಯಂಬುಲೆನ್ಸ್​ನ್ನು ಹೊರತೆಗೆಯಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಆ ಮಹಿಳೆ ಆ್ಯಂಬುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೇ, ಇದಾದ ಬಳಿಕ ಕಾಲ್ನಡಿಗೆಯಲ್ಲಿಯೇ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
Last Updated : Aug 4, 2022, 3:32 PM IST

ABOUT THE AUTHOR

...view details