ಕರ್ನಾಟಕ

karnataka

ETV Bharat / videos

ಉಕ್ರೇನ್‌ನ ಕೀವ್​​​​ನಲ್ಲಿ ರಷ್ಯಾದಿಂದ ಸರಣಿ ಕ್ಷಿಪಣಿ ದಾಳಿ..ಸ್ಪೋಟದಿಂದ ಎಂಟು ಮಂದಿ ಸಾವು - ಈಟಿವಿ ಭಾರತ್ ಕನ್ನಡ ಸುದ್ದಿ

By

Published : Oct 10, 2022, 3:47 PM IST

ಇಂದು ಉಕ್ರೇನ್‌ನ ಕೀವ್​​​ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಸಾಕಷ್ಟು ಅನಾಹುತ ಸಂಭವಿಸಿದ್ದು, ಕನಿಷ್ಠ ಎಂಟು ಜನ ಸಾವನ್ನಪ್ಪಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಕ್ರಿಯಿಸಿದ್ದು, ಇಂದು ದೇಶಾದ್ಯಂತ ಅನೇಕ ಜನ ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ಬೆಳಗ್ಗೆ ಮಧ್ಯ ನಗರವಾದ ಡ್ನಿಪ್ರೊದಲ್ಲಿ ದೂರಸಂಪರ್ಕ ಕಟ್ಟಡವೊಂದಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಇದು ದಕ್ಷಿಣ ನಗರದಲ್ಲಿನ ಹಲವಾರು ದಾಳಿಗಳಲ್ಲಿ ಒಂದಾಗಿದೆ. ಇದರಿಂದ ಕನಿಷ್ಠ ಎಂಟು ಸಾವುಗಳಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details